Wednesday, June 24, 2015

ಎಂಟನೇ ತರಗತಿಯ ಪಠ್ಯ ಭಾಗವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿರಿ 

Sunday, August 3, 2014

ಸಮಾಜವಿಜ್ನಾನ ಹತ್ತನೇ ತರಗತಿಯ 1, 2 ಹಾಗೂ 3 ನೇ ಪಾಠದ ಪ್ರೆಸೆಂಟೇಶನ್ ಫೈಲ್ pdf ರೂಪದಲ್ಲಿ ಲಭಿಸಲು 

ಡೌನ್ ಲೋಡ್ ಪುಟವನ್ನು ತೆರೆಯಿರಿ. 


ನಿಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು mail ಮಾಡಲು ಮರೆಯದಿರಿ.

Saturday, June 14, 2014ಬ್ರೆಜಿಲ್


ಬ್ರೆಜಿಲ್ - ದಕ್ಷಿಣ ಅಮೇರಿಕದ ಜನಸಂಖ್ಯೆ ಮತ್ತು ವಿಸ್ತೀರ್ಣಗಳ ಆಧಾರದ ಮೇಲೆ ಅತಿ ದೊಡ್ಡ ದೇಶ. ದಕ್ಷಿಣ ಅಮೇರಿಕದ ಮಧ್ಯದಿಂದ ಅಟ್ಲಾಂಟಿಕ್ ಮಹಾಸಾಗರದ ವರೆಗೆ ಹಬ್ಬಿರುವ ಈ ದೇಶ ಯುರುಗ್ವೆ, ಅರ್ಜೆಂಟೀನಪೆರಗ್ವೆ, ಬೊಲಿವಿಯಾ, ಪೆರು, ಕೊಲಂಬಿಯಾ, ವೆನೆಜುವೆಲಾ, ಗಯಾನಾ, ಸುರಿನಾಮ್, ಮತ್ತು ಫ್ರೆಂಚ್ ಗಯಾನಾಗಳ ಜೊತೆ ಗಡಿಯನ್ನು ಹೊಂದಿದೆ. ಈಕ್ವೆಡಾರ್ ಮತ್ತುಚಿಲಿ ದೇಶಗಳನ್ನು ಹೊರತುಪಡಿಸಿ ದಕ್ಷಿಣ ಅಮೇರಿಕದ ಎಲ್ಲ ದೇಶಗಳ ಜೊತೆಯೂ ಗಡಿಯನ್ನು ಹೊಂದಿದೆ. ತನ್ನ ಬೃಹತ್ ನೈಸರ್ಗಿಕ ಸಂಪನ್ಮೂಲಗಳು ಮತ್ತು ಅಗ್ಗವಾದ ಕಾರ್ಮಿಕರ ದೆಸೆಯಿಂದ ದಕ್ಷಿಣ ಅಮೆರಿಕದ ಅತಿ ಪ್ರಮುಖ ಆರ್ಥಿಕ ಶಕ್ತಿ ಹಾಗೂ ಪ್ರಾದೇಶಿಕ ನಾಯಕತ್ವವಾಗಿ ಬೆಳೆದಿದೆ. ಪೋರ್ಚುಗಲ್ ದೇಶದ ವಸಾಹತು ಆಗಿದ್ದ ಕಾರಣ ಪೋರ್ಚುಗೀಸ್ ಭಾಷೆ ಬ್ರೆಜಿಲ್ ದೇಶದ ಅಧಿಕೃತ ಭಾಷೆಯಾಗಿದೆ. ಪ್ರಪಂಚದ ಎರಡನೇ ಅತಿ ದೊಡ್ಡ ಕ್ರೈಸ್ತ ಧರ್ಮೀಯರ ದೇಶವೂ ಇದಾಗಿದೆ.

Monday, May 19, 2014ಶನಿಗ್ರಹ ನಮ್ಮ ಸನಿಹ 

ಈ ವಾರ ಶನಿಗ್ರಹ ಭೂಮಿಗೆ ಸಮೀಪ ಬರುತ್ತಿದೆ. ವರ್ಷಕ್ಕೊಮ್ಮೆ ನಡೆಯುವ ಈ ವಿದ್ಯಾಮಾನಕ್ಕೆ SATURNOPPOSITION ಎನ್ನುತ್ತಾರೆ. ಈಗ ಸೂರ್ಯನಿಂದ 145 ಕೋಟಿ ಕಿ.ಮೀ ದೂರದಲ್ಲಿರುವ ಶನಿಗ್ರಹ ಭೂಮಿಗೆ ಸುಮಾರು 15 ಕೋಟಿ ಕಿ.ಮೀ.ನಷ್ಟು ಹತ್ತಿರ ಬರಲಿದೆ.ಸೂರ್ಯ,ಭೂಮಿ ಮತ್ತು ಚಂದ್ರ ಸರಳ ರೇಖೆಯಲ್ಲಿರುತ್ತಾರೆ.
ಸೂರ್ಯಾಸ್ತವಾದೊಡನೆ ಪೂರ್ವಾಕಾಶದಲ್ಲಿ ಶನಿಗ್ರಹ ಉದಯವಾಗಿ ರಾತ್ರಿಯಿಡೀ ಗೋಚರಿಸಲಿದೆ.ಈ ವಾರ ಸಂಜೆಯಾದೊಡನೆಯೇ ಬುಧ , ಗುರು, ಮಂಗಳ ಹಾಗೂ ಶನಿಗ್ರಹಗಳನ್ನು ಬರಿಗಣ್ಣಿನಲ್ಲಿಯೇ ನೋಡಬಹುದು.

Sunday, May 18, 2014

ನರೇಂದ್ರ ದಾಮೋದರದಾಸ್ ಮೋದಿ

ನರೇಂದ್ರ ದಾಮೋದರದಾಸ್ ಮೋದಿ (ಗುಜರಾತಿ: નરેંદ્ર દામોદરદાસ મોદી) (ಜನನ: ಸೆಪ್ಟಂಬರ್ ೧೭೧೯೫೦) ಇವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಗಳು. ಇವರುಅಕ್ಟೋಬರ್ ೭೨೦೦೧ ರಿಂದ ಮುಖ್ಯಮಂತ್ರಿಯಾಗಿದ್ದಾರೆ. ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಗುಜರಾತ್ ವಿಧಾನಸಭೆಯಲ್ಲಿ ಮಣಿನಗರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. 

ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ದಾಖಲೆ ಹೊಂದಿದ್ದಾರೆ. ಇವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಹಾಗು ಎನ್ ಡಿ ಎ ಯ ಪ್ರಧಾನ ಮಂತ್ರಿಯ ಉಮೇದುವಾರರಾಗಿ ಕಾರ್ಯ ನಿರ್ವಹಿಸಿ ಭಾರತದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿರುವರು.

ಫ್ಯುಜಿಟಾ ಮಾಪಕ (ಎಫ್‌-ಸ್ಕೇಲ್‌ ) 

ಫ್ಯುಜಿಟಾ ಮಾಪಕ (ಎಫ್‌-ಸ್ಕೇಲ್‌ ) ಅಥವಾ ಫ್ಯುಜಿಟಾ-ಪಿಯರ್ಸನ್‌ ಮಾಪಕ ವು ಟೊರ್ನೆಡೋ (ಸುಂಟರಗಾಳಿ) ತೀವ್ರತೆಯನ್ನು ಅಳೆಯುವ ಒಂದು ಮಾಪಕವಾಗಿದೆ. ಇದರಲ್ಲಿ ಟೊರ್ನೆಡೋ (ಸುಂಟರಗಾಳಿ)ಗಳಿಂದ ಮಾನವ ನಿರ್ಮಿತ ರಚನೆಗಳಿಗೆ ಮತ್ತು ಸಸ್ಯಸಂಪತ್ತಿಗೆ ಎಷ್ಟು ಹಾನಿಯಾಗಿದೆ ಎಂಬುದನ್ನು ಮುಖ್ಯವಾಗಿ ಆಧರಿಸಿ, ಅಳೆಯಲಾಗುತ್ತದೆ.
Fujita scale
F0F1F2F3F4F5

 ಅಧಿಕೃತ ಫ್ಯುಜಿಟಾ ಮಾಪಕ ವರ್ಗೀಕರಣವನ್ನು ಹವಾಮಾನತಜ್ಞರು (ಮತ್ತು ಇಂಜಿನಿಯರ್‌ಗಳು) ಭೂಮಿ ಮೇಲೆ ಮತ್ತು/ಅಥವಾ ವೈಮಾನಿಕವಾಗಿ ಹಾನಿಯ ಸಮೀಕ್ಷೆಯನ್ನು ಮಾಡಿದ ನಂತರ ನಿರ್ಣಯಿಸುತ್ತಾರೆ. ಜೊತೆಗೆ ಸನ್ನಿವೇಶಗಳನ್ನು ಅವಲಂಬಿಸಿ ಭೂ-ಸುಳಿಯ ವಿನ್ಯಾಸಗಳು(ಚಕ್ರೀಯದ ಗುರುತುಗಳು), ರಾಡಾರ್‌ ಪತ್ತೆಹಚ್ಚುವಿಕೆ , ಪ್ರತ್ಯಕ್ಷ ಸಾಕ್ಷಿಗಳ ಸಾಕ್ಷಾಧಾರಗಳು, ಮಾದ್ಯಮದ ವರದಿಗಳು ಮತ್ತು ಹಾನಿಯ ಚಿತ್ರಗಳು ಹಾಗೂ ಚಲನೆಯ ಚಿತ್ರಗಳನ್ನು (ಮೋಶನ್‌ ಪಿಕ್ಚರ್ಸ್‌) ಮುದ್ರಿಸಿಕೊಂಡಿದ್ದು ಸಿಕ್ಕಿದರೆ ಫೋಟೋಗ್ರಾಮೆಟ್ರಿ/ವಿಡಿಯೋಗ್ರಾಮೆಟ್ರಿಗಳನ್ನು ಮಾಪನಕ್ಕೆ ಬಳಸಿಕೊಳ್ಳಲಾಗುತ್ತದೆ.

ಅಮರಾವತಿ

ಅಮರಾವತಿ' (ಆಂಧ್ರ ಪ್ರದೇಶ) ಇದು ಆಂಧ್ರ ಪ್ರದೇಶ ರಾಜ್ಯದಲ್ಲಿರುವ ಒಂದು ಐತಿಹಾಸಿಕ ಪಟ್ಟಣ.ಇದು ಕೃಷ್ಣಾನದಿಯ ದಡದಲ್ಲಿ,ಗುಂಟೂರು ಜಿಲ್ಲೆಯಲ್ಲಿದೆ.ಈ ಪಟ್ಟಣದ ಉತ್ತರದಲ್ಲಿರುವ ಧರಣಿಕೋಟ ಎಂಬ ಸ್ಥಳವು ಆಂಧ್ರದಲ್ಲಿ ಬೌದ್ಧರ ರಾಜಧಾನಿಯಾಗಿತ್ತು.ಇಲ್ಲಿ ಮೌರ್ಯರ ಕಾಲಕ್ಕಿಂತಲೂ ಹಿಂದಿನ ಸ್ತೂಪವು ದೊರೆತಿದೆ. ಇಲ್ಲಿರುವ ಅಮೃತೇಶ್ವರ ಗುಡಿಯು ಬಹು ಪ್ರಸಿದ್ಧವಾಗಿದೆ.ಈ ಪಟ್ಟಣವು ಶಾತವಾಹನರ ರಾಜಧಾನಿಯೂ ಆಗಿತ್ತು.
ಅಮರೇಶ್ವರಾಲಯ ಗೋಪುರAmareshvaraalaya gopuram
Amaravati Stupa relief at ChennaiMuseum, India

ಇತಿಹಾಸ

ಈ ಸ್ಥಳವು ಸ್ಕಂದ ಪುರಾಣ ದಲ್ಲಿಯೂ ಉಲ್ಲೇಖವನ್ನು ಹೊಂದಿದೆ.ಬೌದ್ಧರ ವಜ್ರಾಯನ ಶಾಖೆಯ ಪ್ರಕಾರ ಗೌತಮ ಬುದ್ಧ ಇಲ್ಲಿ ಅಂದರೆ ಧರಣಿಕೋಟದಲ್ಲಿ ಉಪದೇಶವನ್ನು ನೀಡಿದ. ಇದರನ್ವಯ ಇಲ್ಲಿಯ ಇತಿಹಾಸವು ಕ್ರಿಸ್ತಪೂರ್ವ ೫೦೦ರರಿಂದಲೇ ಪ್ರಾರಂಭವಾಗುತ್ತದೆ. ಲಿಖಿತ ಉಲ್ಲೇಖಗಳ ಪ್ರಕಾರ ಈ ಪ್ರದೇಶವು ಶಾತವಾಹನರಿಂದ ಆಳಲ್ಪಟ್ಟಿತ್ತು.ಮುಂದೆ ಪಲ್ಲವರು, ಪೂರ್ವ ಚಾಲುಕ್ಯ ರು,ತೆಲುಗು ಚೋಳರು ಈ ಪ್ರದೇಶದ ಆಧಿಪತ್ಯ ಹೊಂದಿದರು.ಸುಮಾರು ೧೧ನೆಯ ಶತಮಾನದಲ್ಲಿ ಈ ಪ್ರದೇಶವುಕಾಕತೀಯರಿಂದ ಆಳಲ್ಪಟ್ಟು ಮುಂದೆ ವಿಶಾಲ ಆಂಧ್ರದಲ್ಲಿ ವಿಲೀನವಾಯಿತು.
Holy relic sites map of Andhra Pradesh
ಕ್ರಿಸ್ತಪೂರ್ವ ೫೦೦ನೆಯ ಸುಮಾರು ಇಲ್ಲಿ ಬೌದ್ಧಧರ್ಮವು ಪ್ರವೃದ್ಧಮಾನವಾಗಿತ್ತು. ಇಲ್ಲಿ ದೊರೆತ, ಅಶೋಕ ನಿರ್ಮಿಸಿದ ಸುಂದರ ಸ್ತೂಪವು ಇದಕ್ಕೆ ಸಾಕ್ಷಿಯಾಗಿದೆ.ಇದರ ಫಲಕಗಳಲ್ಲಿ ಗೌತಮಬುದ್ಧನ ಕತೆಯನ್ನು ಕೆತ್ತಲಾಗಿದೆ.ಕ್ರಿಸ್ತಪೂರ್ವ ೨ನೆಯ ಶತಮಾನದಿಂದ ಕ್ರಿಸ್ತಶಕ ೨ನೆಯ ಶತಮಾನದ ವರೆಗೆ ಶಾತವಾಹನರು ಈ ಧರಣಿಕೋಟವನ್ನು ರಾಜಧಾನಿಯನ್ನಾಗಿಸಿಕೊಂಡರು. ಅನಂತರ ಬೌದ್ಧಧರ್ಮವು ಕ್ಷೀಣಗೊಂಡು ಹಿಂದೂಧರ್ಮವು ಪ್ರಬಲವಾದನಂತರ ಈ ಸ್ಥಳವು ಅವಗಣನೆಗೆ ತುತ್ತಾಯಿತು. ಈ ಸ್ಥಳಗಳಲ್ಲಿ ದೊರೆತ ಹಲವಾರು ಚಿತ್ರಿಕೆಗಳು,ವಸ್ತುಗಳು ಚೆನ್ನೈ ಮತ್ತು ಲಂಡನ್ ವಸ್ತುಸಂಗ್ರಹಾಲಯಗಳಲ್ಲಿ ರಕ್ಷಿಸಲ್ಪಟ್ಟಿವೆ.